ರೈಲು: ಎ.ಸಿ ಬೋಗಿಗಳಲ್ಲಿ ಇನ್ನು ಬಣ್ಣದ ಬೆಡ್ಶೀಟ್
35 Reads
Mon, 01/04/2016 - 01:00
1
ನವದೆಹಲಿ (ಪಿಟಿಐ): ರೈಲುಗಳಲ್ಲಿನ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುತ್ತಿದ್ದ ಬಿಳಿ ಬಣ್ಣದ ಹೊದಿಕೆ ಮತ್ತು ದಿಂಬುಗಳು ಇನ್ನು ಮುಂದೆ ಇತಿಹಾಸ ಸೇರಲಿವೆ. ಬೋಗಿಗಳ ಕಿಟಕಿಗಳ ಪರದೆಗಳೂ ಸೇರಿದಂತೆ...
more... ಪ್ರಯಾಣಿಕರಿಗೆ ಬಣ್ಣದ ‘ಬೆಡ್ರೋಲ್’ಗಳನ್ನು ನೀಡಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.
ಹೊಸದಾಗಿ ವಿನ್ಯಾಸ ಮಾಡಿದ ಬಹು ಬಣ್ಣದ ಬೆಡ್ರೋಲ್ಗಳನ್ನು ಶೀಘ್ರವೇ ರಾಜಧಾನಿ ಎಕ್ಸ್ಪ್ರೆಸ್ ರೈಲುಗಳಲ್ಲಿ ನೀಡಲಾಗುತ್ತದೆ ಎಂದು ರೈಲ್ವೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ಬೆಡ್ ರೋಲ್ನಲ್ಲಿ ಎರಡು ಹೊದಿಕೆಗಳು, ಒಂದು ದಿಂಬು ಮತ್ತು ಒಂದು ಸಣ್ಣ ಟವೆಲ್ ಇರುತ್ತದೆ. ಹೊಸ ಬೆಡ್ರೋಲ್ನಲ್ಲಿ ಟವೆಲ್ ಹೊರತು ಪಡಿಸಿ ಉಳಿದೆಲ್ಲವೂ ಬಣ್ಣದ್ದಾಗಿರಲಿವೆ. ಕಿಟಕಿಗಳಿಗೂ ಬಣ್ಣದ ಪರದೆಗಳನ್ನು ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹವಾನಿಯಂತ್ರಿತ ಬೋಗಿಗಳ ಪ್ರಯಾಣಿಕರಿಗೆ ಪ್ರತಿದಿನ ಸುಮಾರು ಮೂರು ಲಕ್ಷ ಬೆಡ್ರೋಲ್ಗಳನ್ನು ಒದಗಿಸಲಾಗುತ್ತಿದೆ. ಬೆಡ್ರೋಲ್ಗಳು ಕೊಳಕಾಗಿದ್ದು, ವಾಸನೆಯಿಂದ ಕೂಡಿವೆ ಎಂಬ ದೂರು ಬರುತ್ತಿತ್ತು. ಹೀಗಾಗಿ ಹೊದಿಕೆ, ಟವೆಲ್ಗಳನ್ನು ಒಗೆಯಲು ಹಲವು ನಿಲ್ದಾಣಗಳಲ್ಲಿ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಸನಗಳ ಮರು ವಿನ್ಯಾಸ: ಈ ಹೊಸ ಪ್ರಯೋಗದೊಂದಿಗೆ ಬೋಗಿಯ ಒಳಭಾಗ ಸುಂದರವಾಗಿ ಕಾಣುವಂತೆ ಮಾಡಲು ಪ್ರಯಾಣಿಕರಿಗೆ ಮೀಸಲಿರುವ ಆಸನಗಳ ಜೋಡಣೆಯ ಮರು ವಿನ್ಯಾಸಕ್ಕೂ ರೈಲ್ವೆ ಇಲಾಖೆ ಮುಂದಾಗಿದೆ.
This was the news. Coloured bedsheets will be given in AC coaches in place of white. Source.www.prajavani.net